person in black jacket sitting on brown wooden bench during sunset

Maa Kamakhya

Experience devotion and community from Bangalore’s cherished temple

Welcome to Maa Kamakhya

Connecting hearts through devotion, updates, and community care at Bangalore's beloved temple.

Connecting you with Maa Kamakhya through devotion and community care

Temple Info :

ಕಾಮಾಖ್ಯ ದೇವಸ್ಥಾನ
ಅಸ್ಸಾಂ ರಾಜ್ಯದಲ್ಲಿನ ಗೌಹಾಟಿಗೆ ಸಮೀಪದ ನೀಲಾಚಲ್‌ ಬೆಟ್ಟಗಳ ಪ್ರದೇಶದಲ್ಲಿರುವ ಕಾಮಾಖ್ಯ ದೇವಸ್ಥಾನವು ಅತೀ ಪ್ರಾಚೀನವಾದುದು ಹಾಗೂ ತಾಂತ್ರಿಕ ಆಚರಣೆಗಳಿಗೆ[3] ಹೆಚ್ಚು ಪ್ರಸಿದ್ಧವಾಗಿದೆ . ಇಲ್ಲಿನ ಆರಾಧ್ಯ ದೇವತೆ ಕಾಮಾಖ್ಯ ದೇವಿ. ಈ ದೇಗುಲ ಕುಲಾಚಾರ ತಂತ್ರ ಮಾರ್ಗ ಎಂಬ ತಾಂತ್ರಿಕ ಆಚರಣೆಗಳ ಕೇಂದ್ರವಾಗಿದೆ ಹಾಗೂ ದೇವಿಯ[4] ಋತುಸ್ರಾವದ ಕುರಿತಾದ ವಾರ್ಷಿಕ ಜಾತ್ರೆ ಅಂಬುಬಾಚಿ ಮೇಳ ಎಂಬುದಾಗಿದೆ. ದೇಗುಲದ ಕಟ್ಟಡ 8-9ನೇ ಶತಮಾನದ್ದು ಮತ್ತು ನಂತರದ ಬದಲಾವಣೆಗಳು[5], ಹೊಸ ಕಟ್ಟಡಗಳು ಸೇರಿದಂತೆ ಇದರ ವಾಸ್ತು ಸ್ವರೂಪ ಸ್ಥಳೀಯವಾದ ನೀಲಾಚಲ್‌[6] ಮಾದರಿ ಎಂದೇ ಕರೆಯಲ್ಪಟ್ಟಿದೆ. ಶಾಕ್ತ[7][8] ಪಂಥದ 51 ಪೀಠಗಳಲ್ಲಿ ಅತಿ ಹಳೆಯದಾದ 4 ಪೀಠಗಳಲ್ಲಿ ಇದೂ ಒಂದು. ತನ್ನ ಇತಿಹಾಸದ ಹೆಚ್ಚಿನ ಭಾಗದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಹೊಂದಿರಲಿಲ್ಲ. 19ನೇ ಶತಮಾನದಲ್ಲಿ ಬಂಗಾಳ ರಾಜ್ಯದಲ್ಲಿ ಬ್ರಿಟಿಶ್‌ ಆಳ್ವಿಕೆಯ[9] ಸಮಯದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದು ಯಾತ್ರಾಸ್ಥಳವಾಗಿ ಬೆಳೆಯಿತು.
ಸ್ಥಳೀಯವಾಗಿಯೇ ಗ್ರಾಮದೇವತೆಯಾಗಿ ಮೂಡಿ ಆರಾಧಿಸಲ್ಪಟ್ಟ ಪೂಜಾ ಕೇಂದ್ರ ಮೂರ್ತಿರಹಿತವಾದ ಶಿಲೆಯಲ್ಲಿ ನೈಸರ್ಗಿಕವಾಗಿ ಸ್ತ್ರೀಯೋನಿಯ ಆಕಾರದಲ್ಲಿದೆ[10]. ಕಾಮರೂಪ ರಾಜ್ಯದ ಮ್ಲೇಚ್ಛವಂಶದ ರಾಜರ ಆರಾಧ್ಯದೈವವಾಗಿ ರಾಜಕೀಯ ಶಕ್ತಿಯ ಗುರುತಾಗಿತ್ತು. ನಂತರದಲ್ಲಿ ಪಾಳ, ಕೋಚ ಮತ್ತು ಅಹೋಂ[11] ವಂಶಸ್ಥರಿಂದಲೂ ಈ ಸಂಪ್ರದಾಯ ಮುಂದುವರಿದಿತ್ತು. ಪಾಳ ರಾಜರ ಕಾಲದಲ್ಲಿ ರಚಿತವಾದ ಕಾಳಿಕಾಪುರಾಣದಂತೆ ಕಾಮರೂಪ ಅರಸರ ಮೂಲ ಜನಕನಾದ ನರಕನಿಗೆ ರಾಜ್ಯಾಧಿಕಾರ ಹೊಂದಲು ಕಾಮಾಖ್ಯಳೇ ಕಾರಣ.
ಐತಿಹಾಸಿಕವಾಗಿ ಇಲ್ಲಿನ ಆರಾಧನೆಯನ್ನು ಮೂರು ಹಂತಗಳಲ್ಲಿ ಹೇಳಲ್ಪಟ್ಟಿದೆ. ಮ್ಲೇಚ್ಛವಂಶ ಕಾಲದ "ಯೋನಿ", ಪಾಳರ ಕಾಲದ "ಯೋಗಿನಿ" ಮತ್ತು ಕೋಚರ[13] ಕಾಲದ "ಮಹಾವಿದ್ಯಾ". ʼಶಕ್ತಿʼಯ ಆರಾಧನೆಯ ಹತ್ತು ಮುಖ್ಯ ಮಹಾವಿದ್ಯೆಗಳೆಂದು ಹೆಸರಾದ ಕಾಳಿ, ತಾರಾ, ತ್ರಿಪುರಸುಂದರಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತ, ಧೂಮವತಿ, ಬಗಲಮುಖಿ, ಮಾತಂಗಿ ಮತ್ತು ಕಮಲಾತ್ಮಿಕಾ[14] ಇವುಗಳಲ್ಲಿ ತ್ರಿಪುರಸುಂದರಿ, ಮಾತಂಗಿ ಮತ್ತು ಕಮಲಾತ್ಮಿಕಾ ದೇವಿಯರು ಮುಖ್ಯ ದೇವಳದಲ್ಲಿ ಇರುವುದು ವಿಶೇಷ ಮತ್ತು ಅಪರೂಪ[16]. ಉಳಿದ ದೇವಿಯರಿಗೆ ಪ್ರತ್ಯೇಕ ದೇಗುಲಗಳಿದ್ದು[15] ಮುಖ್ಯ ದೇವಸ್ಥಾನವನ್ನು ಸುತ್ತುವರಿದಿವೆ. ಇತ್ತೀಚೆಗೆ, ಜುಲೈ 2015ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವಸ್ಥಾನದ ಆಡಳಿತವನ್ನು ಕಾಮಾಖ್ಯ ಡಿಬಟರ್‌ ಮಂಡಳಿಯಿಂದ ಬೋರ್ಡೋರಿ ಸಮಾಜಕ್ಕೆ [17] ಹಸ್ತಾಂತರಿಸಲಾಗಿದೆ.

ದೇಗುಲ ಸಂಕೀರ್ಣ
ಈಗಿನ ದೇಗುಲದ ಆವರಣದಲ್ಲಿನ ಕಟ್ಟಡ, ಶಿಲಾ ಕೆತ್ತನೆಗಳು ಮತ್ತು ಮೂರ್ತಿಗಳನ್ನು ನೋಡಿದರೆ 8ನೇ ಶತಮಾನದಲ್ಲಿ ಕಟ್ಟಿ14ನೇ ಶತಮಾನದ ಯಾ ನಂತರವೂ ನಡೆದಿರಬಹುದಾದ[5] ಬದಲಾವಣೆ ನವೀಕರಣಗಳನ್ನು ಸೂಚಿಸುತ್ತವೆ. 16ನೇ ಶತಮಾನದಿಂದ ಸ್ಥಳೀಯವಾದ "ನೀಲಾಚಲ್‌ ಮಾದರಿ"ಯಲ್ಲಿ ರೂಪುಗೊಂಡಿದೆ. ಇದರಲ್ಲಿ ಶಿಲುಬೆಯಾಕಾರದ ತಳವಿನ್ಯಾಸ[6] ಮತ್ತು ಅರ್ಧಗೋಲಾಕೃತಿಯ ಮೇಲಿನ ಶಿಖರ ಮುಖ್ಯ ಗುರುತುಗಳು.

ಶಿಖರ ಮತ್ತು ಗರ್ಭಗುಡಿ
ಗರ್ಭಗುಡಿಯ ಮೇಲಿನ ಶಿಖರ ಪಂಚಾರಥ ವಿನ್ಯಾಸದಲ್ಲಿದೆ. ಶಿಖರದ ತಳಕಟ್ಟು ತೇಜಪುರದ ಸೂರ್ಯದೇಗುಲದ ಮಾದರಿಯಲ್ಲಿದೆ. ತಳಕಟ್ಟಿನ ಮೇಲ್ಭಾಗದಲ್ಲಿನ ಗೋಡೆಗಳು ಖಜುರಾಹೊ ಯಾ ಮಧ್ಯಭಾರತದ ವಿನ್ಯಾಸಗಳಂತಿದ್ದು ಭಿತ್ತಿಫಲಕಗಳಲ್ಲಿ ಸುಂದರವಾದ ಗಣೇಶ ಮತ್ತು ಇನ್ನಿತರ ಹಿಂದೂ ದೇವತೆಗಳ ಮೂರ್ತಿ ಕೆತ್ತನೆಗಳಿವೆ[19]. ಶಿಖರದ ತಳಭಾಗದವರೆಗೂ ಕಲ್ಲಿನಿಂದ ಕಟ್ಟಲ್ಪಟ್ಟು ಮೇಲ್ಭಾಗದ ಬುರುಜು ಇಟ್ಟಿಗೆಗಳಿಂದ ನಿರ್ಮಿತವಾಗಿದೆ. ಬಹುಭುಜದ ಬುರುಜಿನ ಆಕಾರ ಕಾಮರೂಪದ ದೇಗುಲಗಳ[21] ಗುರುತಾಗಿದೆ. ಸಣ್ಣ ಮೀನಾರ್‌ ಯಾ ಅಂಗಶಿಖರಗಳು - ಬಂಗಾಳದ ಚಾರ್‌ ಚಾಲ[22] ತರಹದ - ಮುಖ್ಯ ಶಿಖರವನ್ನು ಸುತ್ತುವರಿದಿದ್ಧಾವೆ.
ಗರ್ಭಗುಡಿಯು ಶಿಖರದ ಕೆಳಗೆ ನೆಲಮಟ್ಟಕ್ಕಿಂತಲೂ ಕೆಳಸ್ತರದಲ್ಲಿದೆ. ಕತ್ತಲೆಯ ಚಿಕ್ಕಜಾಗ, ಸಣ್ಣಮೆಟ್ಟಿಲಿಳಿದು ಗುಹೆಯಂತಿರುವ ಜಾಗದಲ್ಲಿ ಯಾವುದೇ ಮೂರ್ತಿ ಇಲ್ಲ. ಯೋನಿಯಂತೆ ಒಡೆದ ಕಲ್ಲಿನ ಆಕಾರವೇ ಮುಖ್ಯ ಸ್ಥಳ. ಇದರಲ್ಲಿ ಸದಾಕಾಲ ಚಿಲುಮೆಯ ನೀರು ಹರಿಯುತ್ತಿದ್ದು ಇದೇ ಕಾಮಾಖ್ಯದೇವಿಯ ಮುಖ್ಯಸ್ಥಾನವೆಂದು[23] ಹೇಳಲಾಗುತ್ತದೆ.

ಚಲಂತ, ಪಂಚರತ್ನ ಮತ್ತು ನಾಟ್ಯಮಂದಿರ
ಗರ್ಭಗುಡಿಯ‌ ಪಶ್ಚಿಮಕ್ಕೆ ಚೌಕಾಕೃತಿಯ ಮಂದಿರ ಚಲಂತ. ಉತ್ತರ ದಿಕ್ಕಿನಿಂದ ಪ್ರವೇಶ. ಪ್ರವೇಶದ್ವಾರ ಅಹೋಂ ವಿನ್ಯಾಸದ ದೋಚಾಲತ್.‌ ಇಲ್ಲಿನ ಸಣ್ಣ ಮೂರ್ತಿ ಉತ್ಸವಕಾಲದಲ್ಲಿ ನಡೆಸುವಂಥಾದ್ದು.ಅದಕ್ಕಾಗಿಯೇ ಚಲಂತ ಎಂಬ ಹೆಸರು[25]. ಇದು ಕಾಲಾಂತರದಲ್ಲಿ ಸೇರ್ಪಡೆಯಾಗಿದೆ. ಆವರಣದ ಗೋಡೆಗಳಲ್ಲಿ ನರನಾರಾಯಣ ಹಾಗೂ ಇನ್ನಿತರ ದೇವತೆಗಳ ಕೆತ್ತನೆಗಳಿವೆ[26]. ಪಂಚರತ್ನದ ಆವರಣ [ ವಿವರ ಲಭ್ಯವಿಲ್ಲ] ದಾಟಿದರೆ ನಾಟ್ಯಮಂದಿರ. ಇದು ದೀರ್ಘವೃತ್ತದ ತುದಿ ಹೊಂದಿದ್ದು ಚೂಪಾದ ಮೇಲ್ಛಾವಣಿ - ಅಹೋಂ ಪದ್ಧತಿಯ ರಂಗಾರ್‌ ವಿನ್ಯಾಸ - ಹೊಂದಿದೆ. ಒಳಗೋಡೆಗಳಲ್ಲಿ ರಾಜೇಶ್ವರಸಿಂಘ (1759), ಗೌರೀನಾಥಸಿಂಘ ( 1782) ರಾಜರ ಬಗ್ಗೆ ಕೆತ್ತನೆಗಳಿದ್ದು ಅವರ ಕಾಲದಲ್ಲಿ ಮಾಡಿದ್ದಿರಬೇಕು[28]. ಹೊರ ಗೋಡೆಗಳಲ್ಲಿ ಕಲ್ಲಿನ ಕೆತ್ತನೆಗಳಿವೆ.

ಕಾಮಾಖ್ಯ ಸ್ಥಳ ಇತಿಹಾಸ
ಇತಿಹಾಸಕಾರರ ಪ್ರಕಾರ ಕಾಮಾಖ್ಯ ದೇವಸ್ಥಾನ ಪುರಾತನ ಬಲಿ ನೀಡುವ ಜಾಗವಾಗಿರುವ ಸಾಧ್ಯತೆ ಹೆಚ್ಚು. ಮೂಲನಿವಾಸಿಗಳಾಗಿದ್ದ ಖಾಸಿ ಮತ್ತು ಗಾರೋ ಜನಾಂಗದವರ ದೇವತೆಯ ಹೆಸರು "ಕಾ-ಮೈಖಾ" ( ವಯಸ್ಸಾದ ಚಿಕ್ಕಮ್ಮ ಎಂಬರ್ಥ )[29] ಆಗಿದ್ದು, ಅನೇಕ ಜನಕಥೆಗಳು ಕಾಮಾಖ್ಯ ಹೆಸರಿನ ಮೂಲವನ್ನು ಸೂಚಿಸುತ್ತವೆ[30]. 10ನೇ ಶತಮಾನದ ಕಾಳಿಕಾ ಪುರಾಣ ಮತ್ತು ಯೋಗಿನೀ ತಂತ್ರಗಳಲ್ಲಿ ಕಾಮಾಖ್ಯ ದೇವತೆ ಕಿರಾತಮೂಲದವಳೆಂದು[31] ಮತ್ತು ಕಾಮರೂಪದೇಶ ರೂಪುಗೊಳ್ಳುವುದಕ್ಕಿಂತ ( 4ನೇ ಶತಮಾನ )[32] ಮೊದಲೇ ಕಾಮಾಖ್ಯ ದೇವತೆಯ ಆರಾಧನೆ ಆರಂಭಗೊಂಡಿತ್ತೆಂಬುದರ ವಿವರಣೆ ಇದೆಯಂತೆ.

ಪೂರ್ವೇತಿಹಾಸ
ಕಾಮರೂಪವನ್ನಾಳಿದ ಮೊಟ್ಟಮೊದಲಿನವರು ವರ್ಮಾ ವಂಶದವರು ( ಕ್ರಿ.ಶ. 350-650). ಇವರ ಹಾಗೂ 7ನೇ ಶತಮಾನ ಕಾಲದ ಪ್ರವಾಸಿ ಕ್ಸಾನಜಾಂಗ್‌ ಇವನ ವಿವರಣೆಗಳಲ್ಲಿ ಕಾಮಾಖ್ಯದ ಹೆಸರಿಲ್ಲ. ಅಂದರೆ ಅಲ್ಲಿಯವರೆಗೆ ಸ್ಥಳೀಯ ಕಿರಾತ ಹಾಗೂ ಬ್ರಾಹ್ಮಣೇತರ ವರ್ಗದ[33] ಆರಾಧನೆಯಾಗಿದ್ದೆಂದು ತೋರುತ್ತದೆ. ಸುಮಾರು 8ನೇ ಶತಮಾನದ ಬೌದ್ಧರ ಹೇವಜ್ರ ತಂತ್ರದ ವಿವರಗಳಲ್ಲಿ ಕಾಮರೂಪವೂ ಒಂದು ಪೀಠ[34] ಎಂದಿದೆ. 9ನೇ ಶತಮಾನದಲ್ಲಿ ಮ್ಲೇಚ್ಛವಂಶದ ರಾಜನಾಗಿದ್ದ ವನಮಾಲವರ್ಮದೇವ ಎಂಬುವನು ಬರೆಸಿದ ಫಲಕಗಳಲ್ಲಿ ಕಾಮಾಖ್ಯ ದೇವತೆಯ ಚಿತ್ರಗಳು ಕೆತ್ತಲ್ಪಟ್ಟಿವೆ. ಪುರಾತನಕಲಾ ಶಾಸ್ತ್ರಕಾರರು ದೇವಸ್ಥಾನದ ಕೆಳಬದಿಯ ವಿನ್ಯಾಸಗಳ ಹಿನ್ನೆಲೆಯಲ್ಲಿ ದೇವಸ್ಥಾನವು 5ರಿಂದ 7ನೇ ಶತಮಾನದ್ದೆಂದು[36] ಊಹಿಸಿದ್ದಾರೆ. ಮ್ಲೇಚ್ಛವಂಶದ ದೊರೆಗಳು[35] ತೋರಿದ ಪ್ರಾಮುಖ್ಯತೆ ಗಮನಿಸಿದರೆ ಅವರೇ ದೇಗುಲ ನಿರ್ಮಿಸಿದ್ದಾರೆ ಅಥವಾ ಜೀರ್ಣೋದ್ಧಾರಕರು ಎಂದು ತೋರುತ್ತದೆ[1]. ನೆಲಗಟ್ಟುಗಳ ವಿನ್ಯಾಸ, ಕಟ್ಟುಗಳಿಂದ ಹಳೆಯ ದೇಗುಲವು "ನಾಗರೀ" ಶೈಲಿಯದ್ದು ಎನ್ನಬಹುದು. ಪ್ರಾಯಶಃ ಮಾಳವ ಮಾದರಿಯದ್ದು[37].

ಮಧ್ಯಕಾಲೀನ ಇತಿಹಾಸ
ಕೆಲವು ವದಂತಿಗಳ ಪ್ರಕಾರ ದೇವಸ್ಥಾನವು ರಾಜ ಸುಲೇಮಾನ್‌ ಕರ್ರಾನಿಯ ( 1566-1572 ಸೇನಾಧಿಕಾರಿ ಕಲಾಪಹರ ಎಂಬುವನಿಂದ ನಾಶವಾಗಿದೆಯೆಂದಾದರೂ ದೇಗುಲದ ಪುನರ್ನಿರ್ಮಾಣ( 1565) ಅವನಿಗಿಂತ ಮುಂಚಿನದಾದ್ದರಿಂದ ನಂಬಲರ್ಹವಲ್ಲ. ಮತ್ತೂ ಕಲಾಪಹರ ಪೂರ್ವ ಪ್ರಾಂತಗಳಲ್ಲಿ ಅಷ್ಟು ಮುಂದುವರಿದಿದ್ದ ಬಗ್ಗೆ ದಾಖಲೆಗಳಿಲ್ಲ. ಈಗಿನ ನಂಬಿಗೆಯ ಪ್ರಕಾರ ಹುಸೇನ್‌ ಶಾ ದೊರೆ ಕಾಮಾಟ ರಾಜ್ಯದ ಮೇಲೆ ದಂಡೆತ್ತಿ ಬಂದಾಗ ( 1498)[38] ಧ್ವಂಸವಾಗಿದೆ.
ಕೋಚ್‌ ರಾಜವಂಶ ಸ್ಥಾಪಕನಾದ ವಿಶ್ವಸಿಂಘ ( 1515-1540) ನಿಂದ ದೇವಸ್ಥಾನದ ಅವಶೇಷಗಳು ಹುಡುಕಿಸಲ್ಪಟ್ಟು ಪೂಜಾರಾಧನೆಯು ಪುನಃ ಪ್ರಾರಂಭವಾಯಿತೆಂದು ಹೇಳಲಾಗಿದೆ. ಆತನ ಮಗನಾದ ನರನಾರಾಯಣನ ಆಳ್ವಿಕೆಯಲ್ಲಿ( 1540-1587) ದೇಗುಲವು ಪುನರ್ನಿರ್ಮಾಣಗೊಂಡಿದೆ (1565). ಐತಿಹಾಸಿಕ ದಾಖಲೆಗಳ ಪ್ರಕಾರ ದೇವಸ್ಥಾನದ ಪುನರ್ನಿರ್ಮಾಣದ ಮುಖ್ಯ ಅಧಿಕಾರಿ ಚಿಲರಾಯಿ. [39]ನಿರ್ಮಾಣಕ್ಕೆ ಹಳೆಯ ದೇವಸ್ಥಾನ ಭಾಗಗಳನ್ನೇ ಉಪಯೋಗಿಸಿದ್ದು ಉಳಿದ ಅವಶೇಷಗಳು ಈಗಲೂ ಕಾಣಸಿಗುತ್ತವೆ. ಶಿಖರ ( ಮೇಘಮುಕುಟಂ) ಕಾರ್ಯ ಎರಡು ಬಾರಿ ವಿಫಲಗೊಂಡ ಮೇಲೆ ಇಟ್ಟಿಗೆಯ ಶಿಖರ ಕಟ್ಟಲ್ಪಟ್ಟಿತು. ಉಬ್ಬಿದ ಅರ್ಧಗೋಲಾಕೃತಿಯ ಶಿಖರ[40] ಮತ್ತು ಸುತ್ತುವರಿದಿರುವ ಕಿರು ಮೀನಾರಗಳಂತಿರುವ ಅಂಗಶಿಖರಗಳು[6] ಇಸ್ಲಾಮಿಕ್‌ ಶೈಲಿಯಲ್ಲಿ ನುರಿತ ಬಂಗಾಳ ಪ್ರಾಂತ್ಯದ ಮುಸಲ್ಮಾನ ಕೆಲಸಗಾರರಿಂದ ನಿರ್ಮಿತವಾದದ್ದೆಂದು ತೋರುತ್ತದೆ. ಬಹುಭುಜಾಕೃತಿಯ ತಳವಿರುವ ಅರ್ಧಗೋಲದ ಈ ಮೇಘಮುಕುಟ ವಿನ್ಯಾಸ ಹೊಸ ಶೈಲಿಯಾಗಿ ಗುರುತಿಸಲ್ಪಟ್ಟು ಅಹೋಂ ದೊರೆಗಳ[41] ಕಾಲದಲ್ಲಿ ಪ್ರಸಿದ್ಧಿಯಾಯಿತು.
ಬ್ಯಾನರ್ಜಿ ( 1935 ) ಎಂಬುವರು ದಾಖಲಿಸಿದಂತೆ ಕೋಚ್‌ ದೊರೆಗಳ ಕಟ್ಟಡವನ್ನು[44][45] ಇನ್ನಷ್ಟು ಬಲಪಡಿಸಿ ವಿಸ್ತರಿಸಿದ್ದುಅಹೋಂ ರಾಜರು[42][43]. ೧೬೫೮ರ ಅಂತ್ಯದಲ್ಲಿ ಅಹೋಂ ದೊರೆ ಜಯಧ್ವಜಸಿಂಘನು ಇಟಾಖುಲಿ ಉದ್ಧದಲ್ಲಿ (1681) ಕಾಮರೂಪವನ್ನು ಗೆದ್ದು ದೇಗುಲದ ಸರ್ವಾಧಿಕಾರ ಹೊಂದಿದನು. ಶೈವ-ಶಾಕ್ತ ಪಂಥಗಳನ್ನು ಬೆಂಬಲಿಸಿದ ಅಹೋಂ ರಾಜರು ದೇವಸ್ಥಾನದ ದುರಸ್ತಿ, ಪುನರ್ನಿರ್ಮಾಣಗಳನ್ನು[46] ಮುಂದುವರೆಸಿದರು.
ನಾಡಿಯಾ ಜಿಲ್ಲೆಯ ಶಾಂತಿಪುರದ ಹತ್ತಿರದ ಮಾಲಿಪೋಟಾ ಎಂಬಲ್ಲಿನ ಕೃಷ್ಣಾರಾಮ ಭಟ್ಟಾಚಾರ್ಯ ಎಂಬ ಪ್ರಸಿದ್ಧ ಶಾಕ್ತ ಮಹಾಂತನನ್ನು ರಾಜಾ ರುದ್ರಸಿಂಘನು ( 1696-1714) ಕಾಮಾಖ್ಯದ ಪೂರ್ಣ ಉಸ್ತುವಾರಿಯಾಗಿ ಘೋಷಿಸಿದನು ಮತ್ತು ಮಗನಾದ ಶಿವಸಿಂಘನು( 1714-1744) ಇದನ್ನು ಪೂರ್ಣಗೊಳಿಸಿದನು. ಮಹಾಂತ ಮತ್ತು ಆತನ ವಂಶಜರು ನೀಲಾಚಲ ಬೆಟ್ಟದಲ್ಲಿ ವಾಸ ಮಾಡಿದ್ದರಿಂದ ಅವರನ್ನು ಪರ್ವತೀ ಗೋಸಾಯಿನ್‌ ಗಳೆಂದು ಕರೆಯಲ್ಪಟ್ಟರು. ಕಾಮಾಖ್ಯದ ಅನೇಕ ಅರ್ಚಕರು ಮತ್ತು ಅಸ್ಸಾಂನ ಶಾಕ್ತ ಪಂಥದವರೆಲ್ಲ ಈ ಪರ್ವತೀಗೋಸಾಯಿನ್‌ ಗಳ ಶಿಷ್ಯರು ಅಥವಾ ನಾಟಿ ಮತ್ತು ನಾ ಗೋಸಾಯಿನ್‌ ಗಳು.[48]

ಆರಾಧನೆ
ಸಂಸ್ಕೃತದ ಪುರಾತನ ಕೃತಿ ಕಾಳಿಕಾ ಪುರಾಣದ ವಿವರಣೆಯಂತೆ ಶಿವನ ತರುಣ ಸತಿಯಾಗಿದ್ದು ವಾಂಛೆಗಳನ್ನು ಪೂರೈಸುವ ಮತ್ತು ಮುಕ್ತಿ ನೀಡುವ ದೇವತೆ ಶಕ್ತಿಯೇ ಕಾಮಾಖ್ಯಳಾಗಿದ್ದಾಳೆ. ತಾಯಿ ಕಾಮಾಖ್ಯದೇವಿಯ ಈ ಪುರಾತನ ಸನ್ನಿಧಿಯಲ್ಲಿ ತಾಂತ್ರಿಕ ಪದ್ಧತಿಯೇ ಮೊದಲ ಪೂಜೆ. ಅಸ್ಸಾಂನ ಸ್ತ್ರೀದೇವತೆಗಳ ಆರಾಧನೆಯು ಆರ್ಯ ಮತ್ತು ಆರ್ಯರಲ್ಲದವರ ನಂಬಿಗೆ ಪದ್ಧತಿಗಳ ಮಿಶ್ರಣ[49]. ದೇವತೆಗಳ ವಿವಿಧ ಹೆಸರುಗಳು ಆರ್ಯ ಮತ್ತು ಆರ್ಯೇತರ ದೇವತೆಗಳ[51] ಹೆಸರುಗಳಾಗಿವೆ. ಯೋಗಿನಿ ತಂತ್ರದ ವಿವರಣೆಯಂತೆ ಯೋಗಿನಿಪೀಠದ ಆರಾಧನೆ ಕಿರಾತಪದ್ಧತಿಯಿಂದ ಬಂದಿರುವುದು. ವಾಣೀಕಾಂತ ಕಾಕಟಿಯವರ ಪ್ರಕಾರ, ನರನಾರಾಯಣ ಎಂಬುವರು ಆರಂಭಿಸಿದ ಅರ್ಚಕಪರಂಪರೆಯಲ್ಲಿ ಸ್ತ್ರೀಪ್ರಧಾನ ಪದ್ಧತಿಯ ಗಾರೋಸ್‌ ಜನಾಂಗದವರು ಕಾಮಾಖ್ಯ ಸ್ಥಳದಲ್ಲಿ ಪೂಜಾರ್ಪಣೆಯ ಭಾಗವಾಗಿ ಹಂದಿಗಳನ್ನು ಬಲಿ ಕೊಡುತ್ತಿದ್ದರು[52]. ಬಲಿ ನೀಡುವ ಆಚರಣೆ ಈಗಲೂ ಮುಂದುವರಿದಿದ್ದು ಭಕ್ತರು ಪ್ರತೀ ನಿತ್ಯ ಬೆಳಗ್ಗೆ ಪ್ರಾಣಿ ಪಕ್ಷಿಗಳನ್ನು ದೇವತೆಗಾಗಿ ನೀಡುತ್ತಾರೆ[53].
ದೇವತೆಯನ್ನು ವಾಮಾಚಾರ ಮತ್ತು ದಕ್ಷಿಣಾಚಾರ ಮಾರ್ಗಗಳೆರಡರಲ್ಲೂ[54] ಪೂಜಿಸುತ್ತಾರೆ. ಸಾಮಾನ್ಯವಾಗಿ ಹೂವುಗಳನ್ನು ಮತ್ತು ಪ್ರಾಣಿಗಳನ್ನು ದೇವರಿಗೆ ಅರ್ಪಿಸುತ್ತಾರೆ. ಸಾಮೂಹಿಕ ಬಲಿ ಸಂದರ್ಭಗಳನ್ನು ಹೊರತುಪಡಿಸಿ ಹೆಣ್ಣು ಪ್ರಾಣಿಗಳನ್ನು ಬಲಿ ನೀಡುವುದಿಲ್ಲ[55].

ಪುರಾಣ-ಐತಿಹ್ಯಗಳು
ಕಾಳಿಕಾ ಪುರಾಣದ ಪ್ರಕಾರ, ಕಾಮಾಖ್ಯ ದೇವಸ್ಥಾನವು ಶಿವ ಸತಿಯರ ದೈವೀ ಸಂಗಮದ ಜಾಗ. ಶಿವನ ತಾಂಡವನೃತ್ಯದ ರಭಸಕ್ಕೆ ಸತಿಯ ಯೋನಿ ಗರ್ಭಗಳು ಉದುರಿ ಶವವಾದಳು[56]. ದೇವೀ ಭಾಗವತದಲ್ಲಿ ಸತಿಯ ದೇಹಕ್ಕೆ ಸಂಬಂಧಿಸಿದ 108 ಸ್ಥಳಗಳ ಉಲ್ಲೇಖ ಇದ್ದರೂ ಇದಕ್ಕೇನೂ ಪುರಾವೆ ಕಾಣದು. ಆದರೂ ಸಂಬಂಧಿತ ಗ್ರಂಥಗಳಲ್ಲಿ[57] ಕಾಮಾಖ್ಯದ ಸಂಗತಿಯಿದೆ. ನಂತರದ ಕೃತಿಯಾದ ಯೋಗಿನೀತಂತ್ರದಲ್ಲಿ ಕಾಳಿಕಾ ಪುರಾಣದಲ್ಲಿ ಹೇಳಿದ ವಿಷಯಗಳಿಲ್ಲ ಮತ್ತು ಕಾಮಾಖ್ಯ ದೇವಿಯನ್ನು ಕಾಳಿಯೊಂದಿಗೆ ಹೋಲಿಸಿ ಸ್ತ್ರೀಯೋನಿಯ ಸೃಜನ ಶಕ್ತಿಯ ಗುರುತಾಗಿ ಬಿಂಬಿಸುತ್ತದೆ.[58]
ಕಾರಣಾಂತರಗಳಿಂದ ದೇವಿಯ ದಿವ್ಯಶಾಪಕ್ಕೆ ಗುರಿಯಾದ ಕೋಚ್‌ ಬಿಹಾರ್‌ ರಾಜವಂಶಸ್ಥರು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡುವುದಿಲ್ಲ ಮತ್ತು ದೇವಳದ ಬದಿಯಲ್ಲಿ ಹಾದುಹೋಗುವಾಗ ನೋಟ ಬೇರೆಡೆಗೆ ತಿರುಗಿಸುತ್ತಾರೆ![59]

ಹಬ್ಬಗಳು
ತಾಂತ್ರಿಕ ಆರಾಧನೆಯ ಕೇಂದ್ರವಾದ ಈ ದೇಗುಲದಲ್ಲಿ "ಅಂಬುಬಾಚಿ ಮೇಳ"ವೆಂಬ ವಾರ್ಷಿಕ ಉತ್ಸವ ನಡೆಯುತ್ತದೆ. ಸಹಸ್ರಾರು ತಾಂತ್ರಿಕ ಪದ್ಧತಿಯ ಹಿಂಬಾಲಕರು ಬರುತ್ತಾರೆ. ಇನ್ನೊಂದು ವಾರ್ಷಿಕ ಹಬ್ಬ "ಮಾನಸ ಪೂಜೆ". ಶರನ್ನವರಾತ್ರಿಯ ಸಂದರ್ಭದಲ್ಲಿ ೫ ದಿನಗಳ "ದುರ್ಗಾಪೂಜಾ" ಹಬ್ಬವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.[60]

Gallery

Moments from Maa Kamakhya Temple and community events

MAA KAMAKHYA INNOVATIVE FOUNDATION

146 Bevoor Channapattana, Near Temple Channa Patna, Channapatna, Ramanagar – 562160, Karnataka